ಬೆಂಗಳೂರು ಇಂಡಿಯಾ ನ್ಯಾನೋ:


ಭಾರತದ ಪ್ರಮುಖ ನ್ಯಾನೊ ಕಾರ್ಯಕ್ರಮವಾದ “ಬೆಂಗಳೂರು ಇಂಡಿಯಾ ನ್ಯಾನೋ” ಕಳೆದ 10 ವರ್ಷಗಳಿಂದ ಕೈಗಾರಿಕೆಗಳಿಗೆ, ಸರ್ಕಾರಿ ಮತ್ತು ಅಕಾಡೆಮಿಗಳಿಗೆ ನ್ಯಾನೋಟೆಕ್ ಸಂಶೋಧನೆಗಳ ಬಗ್ಗೆ ಚರ್ಚಿಸಲು ಒಂದು ಅತ್ಯುತ್ತಮ ವೇದಿಕೆಯಾಗುತ್ತಾ ಬಂದಿದೆ.  ಈ ಸಮಾವೇಶವನ್ನು ನ್ಯಾನೋತಂತ್ರಜ್ಞಾನ ದಾರ್ಶನಿಕ ಸಮೂಹ, ಬೆಂಗಳೂರು ಮತ್ತು ಜವಹಾರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆ, ಬೆಂಗಳೂರು ರವರ ಮಾರ್ಗದರ್ಶನದೊಂದಿಗೆ ಮಾಹಿತಿ ತಂತ್ರಜ್ಞನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರವು ಆಯೋಜಿಸಲಾಗುತ್ತಿದೆ.  ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶವು ದೇಶದ ನ್ಯಾನೋಟೆಕ್ನಾಲಜಿ ಉದ್ದಿಮೆಗಳ ಬೆಳವಣಿಗೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ.  

ಪ್ರಸ್ತುತ 9ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶವನ್ನು ಡಿಸೆಂಬರ್ 7,8 2017 (ಗುರುವಾರ ಮತ್ತು ಶುಕ್ರವಾರದಂದು) ಮತ್ತು ಜೆ.ಎನ್.ಸಿ.ಎಸ್.ಆರ್., ಬೆಂಗಳೂರು ಸಂಶೋಧನಾ ಸಂಸ್ಥೆಯವರ ಚಳಿಗಾಲದ ಕೊರ್ಸ್ ಜೊತೆಗೆ ಅನುಸಾರವಾಗುವಂತೆ 9 ನೇ ಡಿಸೆಂಬರ್ 2017 ರಂದು ನ್ಯಾನೋತಂತ್ರಜ್ಞಾನದ ಬಗ್ಗೆ ವಿಶೇಷ ಉಪನ್ಯಾಸವನ್ನು ದಿ ಲಲಿತ್ ಅಶೋಕ ಹೊಟೆಲ್, ಬೆಂಗಳೂರಿನಲ್ಲಿ ನಡೆಸಲಾಯಿತು.  ಈ ಸಮಾವೇಶವು ನ್ಯಾನೋಟೆಕ್ನಾಲಜಿಯ ವಿಷಯದ ತಜ್ಞರು, ವಿಜ್ಞಾನಿಗಳು, ಸಂಶೋಧಕರು, ಉದ್ಯಮಿಗಳು, ಸ್ಟಾರ್ಟ್-ಅಪ್ ಸಂಸ್ಥೆಗಳಿಗೆ ನಾಳಿನ ನ್ಯಾನೋತಂತ್ರಜ್ಞಾನದ ಮತ್ತು ಅದರ ಅನ್ವಯಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲು ಒಂದು ಅತ್ಯುತ್ತಮ ಅವಕಾಶ ಒದಗಿಸಿತು. 

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ :ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ(ಕೆಸ್ಟೆಪ್ಸ್)

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top