ಸಂಚಾರಿ ಡಿಜಿಟಲ್ ತಾರಾಲಯ  : “ಶಾಲೆಯ ಅಂಗಳದಲ್ಲೇ ತಾರಾಲಯ”

 ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಸಂಸ್ಥೆಯು ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನದ ಕುತೂಹಲಕಾರಿ ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳಲು, “ಶಾಲೆಯ ಅಂಗಳದಲ್ಲೇ ತಾರಾಲಯ” ಎಂಬ ಘೋಷವಾಕ್ಯದೊಂದಿಗೆ ಅವರವರ ಶಾಲೆಗಳಗೆ ತೆರಳಿ ಪ್ರದರ್ಶನಗಳನ್ನು ನೀಡುವ ಸಂಚಾರಿ ಡಿಜಿಟಲ್ ತಾರಾಲಯ ಯೋಜನೆಯನ್ನು ಆರ್ಥಿಕ ವರ್ಷ 2017-’18 ರಿಂದ ರಾಜ್ಯದ ಪ್ರತಿ ಕಂದಾಯ ವಿಭಾಗಕ್ಕೆ ಒಂದರಂತೆ (ಬೆಳಗಾವಿಗೆ ಎರಡು) ಒಟ್ಟು ಐದು ಸಂಚಾರಿ ತಾರಾಲಯವನ್ನು ನಿಯೋಜಿಸುವ ವಿನೂತನ ಯೋಜನೆಯನ್ನು ರೂಪಿಸಿತು.

ದೇಶದ ಪ್ರಪ್ರಥಮ ಮತ್ತು ಅತ್ಯಂತ ಮಹತ್ವಾಕಾಂಕ್ಷೆ ಯೋಜನೆಯಾದ “ಸಂಚಾರಿ ಡಿಜಿಟಲ್ ತಾರಾಲಯವನ್ನು ಶ್ರೀ ಎಂ. ಆರ್. ಸೀತಾರಾಂ, ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರು, ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ 23 ಆಗಸ್ಟ್ 2017 ರಂದು ಅನುಷ್ಠಾನಗೊಳಿಸಿದರು. ತದನಂತರ 6ನೇ ಸಂಪ್ಟೆಂಬರ್ 2017 ರಂದು ರಾಜ್ಯಾದ್ಯಂತ ನಿರ್ದಿಷ್ಠ ಜಿಲ್ಲೆಗಳಲ್ಲಿ ನಿಯೋಜಿಸಲಾಯಿತು.  

ಸಂಚಾರಿ ತಾರಾಲಯದ ಪ್ರಮುಖ ವೈಶಿಷ್ಟ್ಯತೆಗಳು:
• ಗಾಳಿ ತುಂಬುವುದರ ಮೂಲಕ ರಚಿತವಾಗಿರುವ ಪ್ರೊಜೆಕ್ಟರ್ ಉಳ್ಳ ಗೋಳಾಕಾರದ ಗೊಮ್ಮಟ – ಆಸನ ಸಾಮಥ್ರ್ಯ 30 ರಿಂದ 40 ವಿದ್ಯಾರ್ಥಿಗಳು 
• ಫಿಶ್-ಐ-ಲೆನ್ಸ್ ಜೋಡಿಸಿರುವ ಡಿಜಿಟಲ್ ಪ್ರೊಜೆಕ್ಟರ್ – ಖಗೋಳ ಹಾಗೂ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ ವೀಡಿಯೋಗಳನ್ನು 360 ಡಿಗ್ರಿಯಲ್ಲಿ ಪ್ರೊಜೆಕ್ಟ್ ಮಾಡಿ 180 ಡಿಗ್ರಿಯಲ್ಲಿ ವೀಕ್ಷಿಸಬಹುದು (ಪೂರ್ತಿ ಗೊಮ್ಮಟ)
• ಗುಣಮಟ್ಟದ ಶಬ್ಧ ವ್ಯವಸ್ಥೆ