ವ್ಯವಸ್ಥಾಪಕ ನಿರ್ದೇಶಕರು

ಡಾ. ಹೆಚ್. ಹೊನ್ನೆಗೌಡ
ವ್ಯವಸ್ಥಾಪಕ ನಿರ್ದೇಶಕರು
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್)
ವಿಶೇಷ ನಿರ್ದೇಶಕರು (ತಾಂತ್ರಿಕ)
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ​
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (ಕೆ.ಎಸ್.ಟಿ.ಎ.)

ಡಾ. ಹೆಚ್ ಹೊನ್ನೆಗೌಡರವರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಿಂದ 1982 ರಲ್ಲಿB.F.Sc. (Bachelor of Fisheries Science), 1985 ರಲ್ಲಿ M.F.Sc. (Master of Fisheries Science)  ಮತ್ತು 1989 ರಲ್ಲಿ ಜಲೀಯ ಜೀವ ವಿಜ್ಞಾನದಲ್ಲಿ (Aquatic Biology) ಪಿ.ಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರು ತಮ್ಮ ಉತ್ತಮ ಸ್ನಾತಕೋತ್ತರ ಸಂಶೋಧನೆಗಾಗಿ ಪ್ರತಿಷ್ಠಿತ ಭಾರತೀಯ ಕೃಷಿ ಸಂಶೋಧನ ಫೆಲೋóಷಿಪ್ ಹಾಗೂ ವಿಶ್ವವಿದ್ಯಾನಿಲಯದ ಚಿನ್ನದ ಪದಕಕ್ಕೆ ಪಾತ್ರರಾಗಿದ್ದರು. ಇವರು ಕರ್ನಾಟಕದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜುಲೈ 1989 ಮತ್ತು ಜುಲೈ 1991 ರ ನಡುವೆ ಪೋಸ್ಟ್ ಡಾಕ್ಟೋರಲ್ ರಿಸರ್ಚ್ ಫೆಲೋ ಆಗಿ ಕೆಲಸ ನಿರ್ವಹಿಸಿದರು.  ನಂತರ 2000 ಇಸವಿಯಲ್ಲಿ, “ಇಂಟಿಗ್ರೇಟೆಡ್ ಕೊಸ್ಟ್‍ಲ್ eóÉೂೀನ್ ಮ್ಯಾನೆಜ್‍ಮೆಂಟ್” ಎಂಬ ಡಿಪ್ಲಮೋ ಕೋರ್ಸ್ ಅನ್ನು ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯ, ಬಾತ್ ವಿಶ್ವವಿದ್ಯಾನಿಲಯ, ಯು.ಕೆ. ಮತ್ತು ಅಣ್ಣಾ ವಿಶ್ವವಿದ್ಯಾನಿಲಯದಿಂದ ಪಡೆದರು. ಇವರ ಮುಖ್ಯ ಕ್ಷೇತ್ರವೆಂದರೆ ಭೂ-ಮಾಹಿತಿ ಅನ್ವಯಗಳನ್ನು (Geoinformatics Applications- Remote Sensing, GIS, GPS and other Geospatial enabled technologies) ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಉಪಯೋಗಿಸುವುದು.  ಇವರು 50ಕ್ಕಿಂತಲೂ ಹೆಚ್ಚು ಸಂಶೋಧನಾ ಪತ್ರಿಕೆಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ ಹಾಗೆಯೇ ಅನೇಕ ರಾಷ್ಟ್ರೀಯ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಪತ್ರಿಕೆಗಳನ್ನು ಮಂಡಿಸಿದ್ದಾರೆ.        
 
ಡಾ. ಹೆಚ್. ಹೊನ್ನೆಗೌಡರವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ 11 ವರ್ಷಗಳ ಕಾಲ ವಿವಿಧ ಸಾಮಥ್ರ್ಯಗಳಲ್ಲಿ (Scientist- SD to Scientist- SF) ಉತ್ತಮ ವೃತ್ತಿಜೀವನವನ್ನು ಹೊಂದಿದ್ದರು.  ನಂತರ ಇವರು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಸಂಸ್ಥೆಯ ನಿರ್ದೇಶಕರಾಗಿ ಜುಲೈ 2000 ರಿಂದ 2007 ರವರೆಗೆ ಕಾರ್ಯನಿರ್ವಹಿಸಿದರು.  ಪ್ರಸ್ತುತ ಡಾ. ಹೆಚ್. ಹೊನ್ನಡಗೌಡರವರು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಶೇಷ ನಿರ್ದೇಶಕರು (ತಾಂತ್ರಕ), ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ (ಕೆಸ್ಟೆಪ್ಸ್) ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.