ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್)
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್)

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್)

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ

ಆರ್ಥಿಕ ವರ್ಷ 2022- 23 ರಿಂದ ಪ್ರಾರಂಭಿಸಲಾದ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ಪ್ರಮುಖ ಯೋಜನೆಗಳು:

 

  1. ಸಂಶೋಧನಾ ಶ್ರೇಷ್ಠತೆಗಾಗಿ ಅನುದಾನ (GRE)

ಹಿಂದಿನ ಕಾರ್ಯಕ್ರಮಗಳಾದ ವಿಜ್ಞಾನ, ಇಂಜಿನಿಯರಿಂಗ್ ಮತ್ತು ವೈದ್ಯಕೀಯದ ಶ್ರೇಷ್ಠ ಕೇಂದ್ರಗಳ ಸ್ಥಾಪನೆ (CESEM) ಮತ್ತು ವಿಜ್ಞಾನ ಮತ್ತು ಇಂಜಿನಿಯರಿಂಗ್ ಶಿಕ್ಷಣದ ಸೃಜನಶೀಲ ಕೇಂದ್ರಗಳ ಸ್ಥಾಪನೆ (CISEE) ಯೋಜನೆಗಳನ್ನು ವಿಲೀನಗೊಳಿಸಿ         ʼಸಂಶೋಧನಾ ಶ್ರೇಷ್ಠತೆಗಾಗಿ ಅನುದಾನʼ (GRE) ಯೋಜನೆಯನ್ನು ರಚಿಸಲಾಗಿದೆ. ಈ ಯೋಜನೆಯಡಿ, ವಿಜ್ಞಾನ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲು ಅನುದಾನವನ್ನು ಒದಗಿಸಲಾಗುವುದು.

 

ಅನುದಾನದ ಅವಧಿ ಮತ್ತು ಮೊತ್ತ: ಎರಡು ವರ್ಷಗಳು: ರೂ. 40.00 ಲಕ್ಷಗಳು:

ಆಯ್ಕೆಯಾದ ಯೋಜನೆಗೆ ಮೊದಲನೇ ವರ್ಷ ರೂ. 25.00 ಲಕ್ಷಗಳು ಮತ್ತು 2 ನೇ ವರ್ಷ ರೂ. 15.00 ಲಕ್ಷಗಳು ಸೇರಿದಂತೆ ಒಟ್ಟು ರೂ. 40.00 ಲಕ್ಷಗಳು.

 

  1. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲ ಸೌಕರ್ಯಾಭಿವೃದ್ಧಿಗೆ ನಿಧಿ (K-FIST L1 & L2)

ರಾಜ್ಯದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಸಂಶೋಧನಾ ಕೇಂದ್ರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮೂಲ ಸೌಕರ್ಯಗಳನ್ನು ಸೃಜಿಸುವುದು ಹಾಗೂ ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಸೌಲಭ್ಯಗಳನ್ನು ಉನ್ನತೀಕರಿಸಿ ಶಿಕ್ಷಣ ಮತ್ತು ಸಂಶೋಧನೆಯ ಮಟ್ಟವನ್ನು ಹೆಚ್ಚಿಸುವುದು ಈ  ಯೋಜನೆಯ ಉದ್ದೇಶವಾಗಿದೆ.

 

K-FIST L1:

ಅನುದಾನದ ಅವಧಿ ಮತ್ತು ಮೊತ್ತ: ಎರಡು ವರ್ಷಗಳು: ರೂ. 20.00 ಲಕ್ಷಗಳು:

ಆಯ್ಕೆಯಾದ ಯೋಜನೆಗೆ ಮೊದಲನೇ ವರ್ಷ ರೂ. 10.00 ಲಕ್ಷಗಳು ಮತ್ತು ಎರಡನೇ ವರ್ಷ ರೂ. 10.00 ಲಕ್ಷಗಳು ಸೇರಿದಂತೆ ಒಟ್ಟು ರೂ. 20.00 ಲಕ್ಷಗಳು.

 

K-FIST L2:

ಅನುದಾನದ ಅವಧಿ ಮತ್ತು ಮೊತ್ತ: ಎರಡು ವರ್ಷಗಳು: ರೂ. 30.00 ಲಕ್ಷಗಳು:

ಆಯ್ಕೆಯಾದ ಯೋಜನೆಗೆ ಮೊದಲನೇ ವರ್ಷ ರೂ. 15.00 ಲಕ್ಷಗಳು ಮತ್ತು ಎರಡನೇ ವರ್ಷ ರೂ. 15.00 ಲಕ್ಷಗಳು ಸೇರಿದಂತೆ ಒಟ್ಟು ರೂ. 30.00 ಲಕ್ಷಗಳು.

 

  1. ಆರಂಭಿಕ ವೃತ್ತಿ ಸಂಶೋಧನಾ ಪ್ರಶಸ್ತಿ (ECRA)

ಯುವ ಸಂಶೋಧಕರು ತಾವು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಸಂಶೋಧನೆಯನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸಲು ಅನುದಾನವನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

 

ಅನುದಾನದ ಅವಧಿ ಮತ್ತು ಮೊತ್ತ: ಎರಡು ವರ್ಷಗಳು: ರೂ. 10.00 ಲಕ್ಷಗಳು:

ಆಯ್ಕೆಯಾದ ಯೋಜನೆಗೆ ಮೊದಲನೇ ವರ್ಷ ರೂ. 5.00 ಲಕ್ಷಗಳು ಮತ್ತು ಎರಡನೇ ವರ್ಷ ರೂ. 5.00 ಲಕ್ಷಗಳು ಸೇರಿದಂತೆ ಒಟ್ಟು ರೂ. 10.00 ಲಕ್ಷಗಳು.

 

  1. ಬೋಧಕರಿಗೆ ತರಬೇತಿ ಕಾರ್ಯಾಗಾರ (FDP)

ಈ ಯೋಜನೆಯಡಿ, ವಿಜ್ಞಾನ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳ ಅಧ್ಯಾಪಕರುಗಳಿಗೆ ಕೈಗಾರಿಕೆಗಳಿಗೆ ಅಗತ್ಯವಿರುವ ಇತ್ತೀಚಿನ ತಂತ್ರಜ್ಙಾನಗಳ ಕುರಿತ ಜ್ಞಾನ ಮತ್ತು ಮತ್ತು ಕೌಶಲ್ಯ ವನ್ನು ಹೆಚ್ಚಿಸಲು ಹಾಗೂ ಪ್ರತಿಯಾಗಿ ಇವುಗಳನ್ನು ವಿದ್ಯಾರ್ಥಿಗಳಿಗೆ ಪ್ರಸರಿಸಲು  ಅನುವಾಗುವಂತೆ ಕಾರ್ಯಾಗಾರ ನಡೆಸಲು ಅನುದಾನ ನೀಡಲಾಗುವುದು.

 

ಅನುದಾನದ ಅವಧಿ ಮತ್ತು ಮೊತ್ತ: ಒಂದು ವರ್ಷ: ರೂ. 3.00 ಲಕ್ಷಗಳು:

ಆಯ್ಕೆಯಾದ ಯೋಜನೆಗೆ  ಒಂದೇ ಕಂತಿನ ಅನುದಾನವಾಗಿ ರೂ. 3.00 ಲಕ್ಷಗಳನ್ನು 4 ದಿನಗಳ ಕಾರ್ಯಾಗಾರ ನಡೆಸಲು ನೀಡಲಾಗುವುದು.

 

  1. ಅತ್ಯುತ್ತಮ ಸಂಶೋಧನಾ ಪ್ರಕಟಣೆಗಾಗಿ ಪ್ರಶಸ್ತಿ (AORP)

ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ಮತ್ತು ಪೀರ್-ರಿವ್ಯೂಡ್ ವೈಜ್ಞಾನಿಕ  ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ ಅತ್ಯುತ್ತಮ ಸಂಶೋಧಕರು ಮತ್ತು ಅಧ್ಯಾಪಕರುಗಳನ್ನು ಪ್ರೋತ್ಸಾಹಿಸಿ ಪುರಸ್ಕರಿಸಲು  ನಗದು ಪ್ರಶಸ್ತಿಯನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

 

ಅನುದಾನದ  ಮೊತ್ತ: ರೂ. 25,000/-ಗಳು:             

ಆಯ್ಕೆಯಾದ ಪಲಾನುಭವಿಗಳಿಗೆ ನಗದು ಬಹುಮಾನವಾಗಿ ರೂ. 25,000/-ಗಳನ್ನು ಮತ್ತು   ಪ್ರಶಸ್ತಿ ಪ್ರಮಾಣಪತ್ರವನ್ನು ನೀಡಲಾಗುವುದು

 

ಹೆಚ್ಚಿನ ಮಾಹಿತಿಗಾಗಿ : https://vgstdst.karnataka.gov.in/