ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್)
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್)

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್)

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಕರ್ನಾಟಕ DST PhD ಶಿಷ್ಯವೇತನ

ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ಪಿಹೆಚ್.ಡಿ. ಸಂಶೋಧನೆಯನ್ನು ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2018-‘19ನೇ ಸಾಲಿನಿಂದ ಹೊಸ ಯೋಜನೆಯಾಗಿ “ವಿಜ್ಞಾನ ಮತ್ತು ಇಂಜಿನಿಯರಿಂಗ್‍ನ ಪಿಹೆಚ್.ಡಿ. ಸಂಶೋಧಕರಿಗೆ ಡಿ.ಎಸ್.ಟಿ. ಶಿಷ್ಯವೇತನ“ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಒಟ್ಟು 60 ವಿದ್ಯಾರ್ಥಿಗಳಿಗೆ ಮಾಸಿಕ ರೂ. 20,000.00 ಗಳಂತೆ(3 ವರ್ಷ) ಶಿಷ್ಯವೇತನವನ್ನು ನೀಡಲು ಉದ್ದೇಶಿಸಿ, ಕರ್ನಾಟಕದಲ್ಲಿರುವ ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯ/ಸಂಸ್ಥೆ/ಕಾಲೇಜುಗಳಲ್ಲಿ ಈಗಾಗಲೇ ಪಿಹೆಚ್.ಡಿ. ಪದವಿಗೆ ನೋಂದಾಯಿತರಾಗಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.

 

ವಿಜ್ಞಾನ ಮತ್ತು ಇಂಜಿನಿಯರಿಂಗ್‍ನಲ್ಲಿ ಪಿಹೆಚ್.ಡಿ. ಸಂಶೋಧನೆಗೆ ಕರ್ನಾಟಕ ಡಿ.ಎಸ್.ಟಿ.-ಪಿಹೆಚ್.ಡಿ. ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಡಿ.ಎಸ್.ಟಿ.) “ವಿಜ್ಞಾನ ಮತ್ತು ಇಂಜಿನಿಯರಿಂಗ್‍ನಲ್ಲಿ ಪಿಹೆಚ್.ಡಿ. ಸಂಶೋಧನೆಗೆ ಕರ್ನಾಟಕ ಡಿ.ಎಸ್.ಟಿ.-ಪಿಹೆಚ್.ಡಿ. ಶಿಷ್ಯವೇತನ” ಎಂಬ ಕಾರ್ಯಕ್ರಮವನ್ನು ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಮುಖಾಂತರ ಅನುಷ್ಠಾನಗೊಳಿಸುತ್ತಿದೆ.

 

2025-26ನೇ ಸಾಲಿನಲ್ಲಿ ಸದರಿ ಯೋಜನೆಯಡಿ ಶಿಷ್ಯವೇತನ ಪಡೆಯಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆ/ ಕಾಲೇಜುಗಳಲ್ಲಿ ಈಗಾಗಲೇ ಪಿಹೆಚ್.ಡಿ. ಪದವಿಗೆ ನೋಂದಾಯಿತರಾಗಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

 

ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು 20 ಡಿಸೆಂಬರ್ 2025 (ಸಂಜೆ 5.00 ಗಂಟೆ) ವರೆಗೆ ವಿಸ್ತರಿಸಲಾಗಿದೆ.

 

 

ಅರ್ಜಿ ಸಲ್ಲಿಸುವ ಲಿಂಕ್ –  https://forms.gle/yNk5NXa524Ergfsq9

 

ಮಾರ್ಗಸೂಚಿ - https://shorturl.at/zVFVN