ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಸಂಚಾರಿ ಡಿಜಿಟಲ್‌ ತಾರಾಲಯ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನ ಶಿಕ್ಷಣವನ್ನು ಅವರವರ ಶಾಲೆಗಳಗೆ ತೆರಳಿ ಪ್ರದರ್ಶನಗಳನ್ನು ಪ್ರದರ್ಶಿಸುವ ಸಲುವಾಗಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಸಂಸ್ಥೆಯು ಸಂಚಾರಿ ಡಿಜಿಟಲ್ ತಾರಾಲಯ ಯೋಜನೆಯನ್ನು 2017 ರಲ್ಲಿ ಪ್ರಾರಂಭಿಸಿ, ಅನುಷ್ಠಾನಗೊಳಿಸುತ್ತಿದೆ. ಸಂಚಾರಿ ಡಿಜಿಟಲ್ ತಾರಾಲಯವು ಅತ್ಯಾಧುನಿಕ ಪ್ರಜೆಕ್ಟರ್ ನ ಸಹಾಯದಿಂದ ವಿಶೇಷ ಗೋಳಾಕಾರದ ಗೊಮ್ಮಟದಲ್ಲಿ ಅದ್ಭುತ ಕಾಲ್ಪನಿಕ ಆಕಾಶವನ್ನು ಸೃಷ್ಠಿಸುವ ಸಾಮರ್ಥ್ಯವನ್ನು ಹೊಂದಿದೆ.  ಈ ತಾರಾಲಯಗಳು STEAM (Science, Technology, Engineering, Arts and Mathematics) ಗೆ ಸಂಬಂಧಿಸಿದ ಪ್ರದರ್ಶನಗಳನ್ನು ಮನರಂಜನೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರದರ್ಶಿಸುತ್ತವೆ.  ಪ್ರತಿ ಪ್ರದರ್ಶನಗಳು ನೈಜತೆಯ ರೂಪದಲ್ಲಿದ್ದು, ವಿಶೇಷ ಅನುಭವಗಳನ್ನು ಮಕ್ಕಳಲ್ಲಿ ಉಂಟುಮಾಡುತ್ತದೆ.  ಪ್ರದರ್ಶನಗಳು 25 ರಿಂದ 30 ನಿಮಿಷಗಳಾಗಿದ್ದು, ಒಂದು ಬಾರಿಗೆ 30 ರಿಂದ 40 ವಿದ್ಯಾರ್ಥಿಗಳು ವೀಕ್ಷಿಸಬಹುದಾಗಿದೆ. 

ಆರ್ಥಿಕ ವರ್ಷ 2019-20 ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಿಂದ ಒಟ್ಟು 6 ಸಂಚಾರಿ ಡಿಜಿಟಲ್ ತಾರಾಲಯಗಳನ್ನು ಖರೀದಿಸಲಾಯಿತು. ಸನ್ಮಾನ್ಯ ಮುಖ್ಯಮಂತ್ರಿಗಳು ಈ ಸಂಚಾರಿ ತಾರಾಲಯಗಳನ್ನು ಸೆಪ್ಟೆಂಬರ್ 2019ರ ಮಾಹೆಯಲ್ಲಿ ಉದ್ಘಾಟಿಸಿದರು. 2018-19ನೇ ಸಾಲಿನಲ್ಲಿ ಹನ್ನೊಂದು ಸಂಚಾರಿ ತಾರಾಲಯಗಳು ರಾಜ್ಯದ ವಿವಿಧ ಜಿಲ್ಲೆಗಳ 1,439 ಪ್ರೌಢಶಾಲೆಗಳಿಗೆ ಭೇಟಿ ನೀಡಿ 10,983 ಪ್ರದರ್ಶನಗಳನ್ನು ಪ್ರದರ್ಶಿಸಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಒಟ್ಟು 3,83,043 ಜನರು ಇದರ ಫಲಾನುಭವವನ್ನು ಪಡೆದಿರುತ್ತಾರೆ.

   

          

ಇತ್ತೀಚಿನ ನವೀಕರಣ​ : 20-08-2020 01:43 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್)
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ